
16th September 2025
ಕುಷ್ಟಗಿ: ಹನುಮನಾಳ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕುಷ್ಟಗಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಕ್ರೀಡಾಕೂಟದಲ್ಲಿ ಕುಷ್ಟಗಿ ನಗರದಲಎಸ್ ವಿ ಸಿ ಸೈನ್ಸ್ ಮತ್ತು ಕಾಮರ್ಸ್ ಪಿಯು ಕಾಲೇಜು ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶಟಲ್ ಬ್ಯಾಡ್ಮಿಂಟನ್ ಆಟದಲ್ಲಿ ಎಸ್ ವಿ ಸಿ ಕಾಲೇಜು ವಿದ್ಯಾರ್ಥಿಗಳು ಅನ್ನದಾನೇಶ್ವರ ಪದವಿಪೂರ್ವ ಕಾಲೇಜು ತಂಡದ ವಿರುದ್ಧ 15 - 9 ಅಂತರದ ಜಯ ದಾಖಲಿಸಿದರು.
ಗುಂಡು ಎಸೆತ ಸ್ಪರ್ಧೆಯಲ್ಲಿ ಪೃಥ್ವಿ ಹೆಚ್ ಎಸ್ ಪ್ರಥಮ ಸ್ಥಾನ, ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಚಿರಂಜೀವಿ ದ್ವಿತೀಯ ಸ್ಥಾನ, ಚೆಸ್ ಸ್ಪರ್ಧೆಯಲ್ಲಿ ವಿರೇಶ್ ಮತ್ತು ಮಾರುತಿ ಪ್ರಥಮ ಸ್ಥಾನ,
ಕರಾಟೆ ಸ್ಪರ್ಧೆಯಲ್ಲಿ ಸಂಜಯ್ ಪ್ರಥಮ ಸ್ಥಾನ, ಪೃಥ್ವಿ ಎಚ್.ಎಸ್ ದ್ವಿತೀಯ ಸ್ಥಾನ, ಈಜು ಸ್ಪರ್ಧೆಯಲ್ಲಿ ಸಂಜಯ್ ಪ್ರಥಮ ಸ್ಥಾನ ಹಾಗೂ ಅಜಯ್ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು.
ಎಸ್ ವಿ ಸಿ ಕಾಲೇಜಿನ ವಿದ್ಯಾರ್ಥಿನಿಯರು ಹ್ಯಾಂಡ್ ಬಾಲ್ ಆಟದಲ್ಲಿ ಹನುಮನಾಳ ಸರಕಾರಿ ಪದವಿ ಪೂರ್ವ ಕಾಲೇಜು ತಂಡದ ವಿರುದ್ಧ 5-3 ಗೋಲುಗಳ ಅಂತರದ ಜಯ ದಾಖಲಿಸಿದರು.
ದೈಹಿಕ ಶಿಕ್ಷಕರಾದ ಸಂತೋಷ್ ಮತ್ತು ರಮೇಶ್ ಬೆಸ್ಟ್ ರೆಫರಿ ಅವಾರ್ಡ್ ಪಡೆದರು.
ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸಿ ವಿ ಚಂದ್ರಶೇಖರ್, ಸಿಇಓ ಡಾ ಜಗದೀಶ್ ಅಂಗಡಿ, ಪ್ರಾಂಶುಪಾಲರಾದ ಭೀಮಸೇನ್ ಆಚಾರ್ ಹಾಗೂ ಉಪನ್ಯಾಸಕ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ವರದಿ: ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.
ಹನುಮನಾಳ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕುಷ್ಟಗಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳ ಪ್ರಶಸ್ತಿಗಳಲ್ಲಿ ಕುಷ್ಟಗಿ ಪಟ್ಟಣದ ಎಸ್ ವಿ ಸಿ ಸೈನ್ಸ್ ಮತ್ತು ಕಾಮರ್ಸ್ ಪಿಯು ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಪಾಲನ್ನು ತಮ್ಮದಾಗಿಸಿಕೊಂಡರು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ಇಂದು 15 ನೇ ದಿನಾಂಕ ಬುಧುವಾರ ಹಾಗೂ ನಾಳೆ 16 ನೇ ದಿನಾಂಕ ಗುರುವಾರ ಪುಣ್ಯಸ್ಮರಣೋತ್ಸವದ ಹಾಗೂ ಶ್ರೀ ಮಠದ ಉದ್ಘಾಟನೆ.
ಶ್ರೀ ಗುರು ಶಂಕರಲಿಂಗ ಶಿವಯೋಗಿಗಳ ಜಾತ್ರೆಯ ನಿಮಿತ್ಯ 3ನೇ ದಿನದಂದು ಬೆಟ್ಟದಲ್ಲಿ ಸತತ 24 ತಾಸು ಭಜನೆ
ಹಿರೇಮನ್ನಾಪೂರ ಗ್ರಾಮದಲ್ಲಿ ಗುರುವಾರ ಎರಡನೇ ದಿನದ ಪುರಾಣ ಕಾರ್ಯಕ್ರಮ ಉದ್ಘಾಟನೆ
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಕುರಿತು ಕುಷ್ಟಗಿ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ